ಮಂಗಳವಾರ, ಮಾರ್ಚ್ 24, 2009

ಲಸಿಕೆ ಎಂಬ ಮಹಾವಿಷ!

ಲಸಿಕೆಯನ್ನು ತಯಾರಿಸಲು ಬೇಕಾಗುವ ಮೂಲ ಪದಾರ್ಥಗಳು ವೈರಾಣುಗಳು. ಒಂದು ಡೊಸ್ ಲಸಿಕೆ ತಯಾರಿಸಲು ಏಳು ಲಕ್ಷ ವೈರಾಣುಗಳು ಬೇಕಾಗುತ್ತವೆ! ಕೋಟಿಗಟ್ಟಲೇ ವೈರಾಣುಗಳನ್ನು ತಯಾರಿಸಲು ನರ್ಸರಿಗಳಲ್ಲಿ ಪ್ರಾಣಿಗಳ ಪಕ್ಷಿಗಳ ಜೀವಂತ ಜೀವಕೋಶಗಳನ್ನು ಹಾಗೂ ಅಂಗಾಂಶಗಳನ್ನು ಬಳಸಲಾಗುತ್ತದೆ. ಕೆಲವೊಮ್ಮೆ ಗರ್ಭಪಾತಕ್ಕೊಳಗಾದ ಮಾನವ ಭ್ರೂಣವನ್ನು ಬಳಸಲಾಗುತ್ತದೆ!! (ಕ್ರೌರ್ಯ ನಂ.೧). ಪೋಲಿಯೋ ಲಸಿಕೆಯ ವೈರಾಣುಗಳನ್ನು ಕೋತಿಗಳ ಕಿಡ್ನಿಯ ಮೇಲೆ ಬೆಳೆಸಲಾಗುತ್ತದೆ. ಈ ವೈರಾಣುಗಳ ಪೋಷಣೆಗಾಗಿ ಕೆಲವು ರಾಸಾಯನಿಕಗಳನ್ನು ಬಳಸಬೇಕಾಗುತ್ತದೆ. ಈ ಪೋಷಕಗಳನ್ನು ಆಕಳಿನ ಭ್ರೂಣದ ರಕ್ತಸಾರವನ್ನು ಹಾಗೂ ಕೆಲವೊಮ್ಮೆ ಮಾನವ ಭ್ರೂಣದ ರಕ್ತಸಾರವನ್ನೂ ಬಳಸಬೇಕಾಗುತ್ತದೆ. (ಕ್ರೌರ್ಯ ನಂ.೨) !!! ಇವು ವಿಶ್ವದಾದ್ಯಂತ ಪಾಲಿಸುತ್ತಿರುವ ವಿಧಾನಗಳಾದ್ದರಿಂದ ಅಥೆಂಟಿಸಿಟಿ ಸ್ವತಃ ಡಾಕ್ಟರ್ ಗಳೇ ಕೊಡಬಲ್ಲರು ಎಂದುಕೊಳ್ಳುತ್ತೇನೆ. ಭ್ರೂಣದ ಆಕರವನ್ನು ಬಿ.ಬಿ.ಸಿ ಅರೋಗ್ಯ ವಾರ್ತೆ ದೃಢಪಡಿಸಿದೆ. (ಅಕ್ಟೋಬರ್ ೨೦, ೨೦೦೦).
ಲಸಿಕೆಗಗಾಗಿ ಬಳಸಲಾಗುವ ವೈರಾಣುಗಳನ್ನು ಅಂಗಾಂಶಗಳಿಂದ ಬೇರ್ಪಡಿಸುವುದು ಹಾಗೂ ಸಂಸ್ಕರಿಸುವುದು ಅತ್ಯಂತ ಜಟಿಲ ಕೆಲಸ. ಇದಕ್ಕಾಗಿ ವಿವಿಧ ರಾಸಾಯನಿಕ ಸಂಸ್ಕಾರಕಗಳನ್ನು ಸಂಸ್ಕರಣೆಗಾಗಿ ಬಳಸಲಾಗುತ್ತದೆ. ಈ ಸಂಸ್ಕಾರಕಗಳು ಮಾನವ ದೇಹಕ್ಕೆ ಎಷ್ಟು ಸುರಕ್ಷಿತ ಎಂಬುದಕ್ಕೆ ಧನಾತ್ಮಕ ಉತ್ತರಗಳಿಲ್ಲ. ಬೀಟಾ-ಪ್ರೊಪಿಯೊಲೊಕ್ಟೇನ್, ಬೋರಾಕ್ಸ್, ಅಲುಮಿನಿಯಮ್ ಹೈಡ್ರಾಕ್ಸೈಡ್, ಸಲ್ಫೇಟ್, ಫಾಸ್ಫೇಟ್‍ಗಳು ಇತ್ಯಾದಿ ೫೦ ಕ್ಕೂ ಹೆಚ್ಚು ರಸಾಯನಿಕಗಳು ಈ ಪಟ್ಟಿಯಲ್ಲಿವೆ. ಇವುಗಳ ಜೊತೆಗೆ ಪ್ರಾಣಿಗಳ, ಪಕ್ಷಿಗಳ ಅಂಗಾಂಶಗಳು ಹಾಗೂ ಅಂಗಗಳು!!!
ಈ ರೀತಿ ಬೆಳೆಸಿದ ವೈರಾಣುಗಳನ್ನು ಲಸಿಕೆ ತಯಾರಿಕೆಗಾಗಿ ಎರಡು ರೀತಿಯಲ್ಲಿ ಬಳಸಲಾಗುತ್ತದೆ. ಮೊದಲನೆಯದು ಲೈವ್ ವ್ಯಾಕ್ಸಿನ್‍ಗಳು. ಅಂದರೆ ವೈರಾಣುಗಳನ್ನು ಅರ್ಧಂಬರ್ಧ ಸಾಯಿಸಿ ತಯಾರಿಸಲಾಗುತ್ತದೆ. ಎರಡನೆಯದು ವೈರಾಣುಗಳನ್ನು ಸಂಪೂರ್ಣವಾಗಿ ಸಾಯಿಸಿ ತಯಾರಿಸುವ ಕಿಲ್ಡ್ ಅಥವಾ ಡೆಡ್ ವ್ಯಾಕ್ಸಿನ್. ಈ ರೀತಿಯ ಕೊಟ್ಯಂತರ ವೈರಾಣುಗಳಿಂದ ನೂರಾರು ರಸಾಯನಿಕಗಳಿಂದ ತಯಾರಾದ ಅರೆದ್ರವ ರೂಪದ ಲಸಿಕೆಯನ್ನು ’ಬಲ್ಕ್’ ಎನ್ನುತ್ತಾರೆ. ಕೆಲವೊಮ್ಮೆ ಎರಡು ಮೂರು ರೀತಿಯ ಬಲ್ಕ್ ಗಳನ್ನು ಸೇರಿಸಿ ವ್ಯಾಕ್ಸಿನ್ ಗಳನ್ನು ತಯಾರಿಸಲಾಗುತ್ತದೆ. ಲಸಿಕೆಗಳನ್ನು ಸಂಗ್ರಹಿಸುವುದು ಇನ್ನೂ ಕಷ್ಟದ ಕೆಲಸ. ನಿರಂತರವಾಗಿ ಅವುಗಳನ್ನು ೨ ರಿಂದ ೮ ಡಿಗ್ರೀ ಉಷ್ಣಾಂಶದೊಳಗೆ ಇಟ್ಟಿರಬೇಕು. ದೇಶದಿಂದ ದೇಶಕ್ಕೆ ಸಾಗಿಸುವಾಗ ಇನ್ನೂ ಕಷ್ಟ. ಸಂಗರಹಣಾ ಸಮಯದಲ್ಲಿ ಸಲ್ಪ ಹೆಚ್ಚು ಕಡಿಮೆಯಾದರೂ ಅಪಾಯ ತಪ್ಪಿದ್ದಲ್ಲ. ಇದೆಲ್ಲಾ ಹಂತಗಳನ್ನು ದಾಟಿ ಲಸಿಕೆ ತಯಾರಿಸಲು ಬೇಕಾಗುವುದು ಒಂದರಿಂದ ಒಂದೂವರೆ ವರ್ಷಗಳು!
ವ್ಯಾಕ್ಸಿನೇಷನ್‍ಗಳನ್ನು ಸಂರಕ್ಷಿಸಲು ತೈಮರೊಸಾಲ್ ಎಂಬ ರಾಸಾಯನಿಕ ಸಂರಕ್ಷಕಗಳನ್ನು ಬಳಸಲಾಗುತ್ತದೆ. ಈ ತೈಮರೊಸಾಲ್ ನ್ನು ಪಾದರಸದಿಂದ ತಯಾರಿಸಲಗುತ್ತದೆ. ಪಾದರಸ ವಿಶ್ವದ ಎರಡನೆಯ ಅತಿ ಘೋರ ವಿಷ! ನಮ್ಮ ಮಕ್ಕಳಿಗೆ ಕೊಡುವ ಹದಿನೆಂಟು ಲಸಿಕೆಗಳ ಪೈಕಿ ೧೨ ಲಸಿಕೆಗಳು ತೈಮೊರೊಸಾಲ್‍ನ್ನು ಹೊಂದಿರುತ್ತವೆ. ಇದರಲ್ಲಿ ೦.೦೦೦೨ ಗ್ರಾಂ ಪಾದರಸವಿರುತ್ತದೆ. ನೂರು ಲೀಟರ್ ನೀರಿನಲ್ಲಿ ೦.೦೦೦೨ ಗ್ರಾಂ ಪಾದರಸ ಕುಡಿಯಲು ಯೋಗ್ಯವಲ್ಲ. ದೊಡ್ಡವರಿಗೇ ಅಪಾಯಕಾರಿಯಾದ ಮಟ್ಟದ ಪಾದರಸವನ್ನು ೨ ವರ್ಷಗಳಿಗಿಂತ ಚಿಕ್ಕ ಹಸುಳೆಗಳಿಗೆ ನೀಡುತ್ತಿದ್ದೇವೆ. (ಕ್ರೌರ್ಯ ನಂ. ೩) (ಆಕರ: ಡಾ.ಬಾಯ್ಡ್ ಹ್ಯಾಲಿ) ಅನೇಕ ಸಂಘಸಂಸ್ಥೆಗಳ ಒತ್ತಾಯದಿಂದ ಪಾದರಸಯುಕ್ತ ಲಸಿಕೆ ತಯಾರಿಸುವುದನ್ನು ೨೦೦೦ ನೇ ಇಸವಿಯಲ್ಲಿ ನಿಷೇಧಿಸಲಾಯಿತು. ಕಂಪನಿಗಳು ಇದನ್ನು ಒಪ್ಪಿ ಸಹಿ ಹಾಕಿದ್ದರೂ ಇಂದಿಗೂ ಉತ್ಪಾದನೆ ನಿಂತಿಲ್ಲ. (ಡಲ್ಲಾಸ್‍ನ ಪತ್ರಕರ್ತ ವಲೇರಿ ವಿಲ್ಲಿಯಮ್ಸ್‍ರ ವರದಿ).
ಬ್ರಿಟಿಷ್ ಮೆಡಿಕಲ್ ಜರ್ನಲ್ ನಡೆಸಿದ ಸರ್ವೆಯಲ್ಲಿ ಶೇ.೫೦ ಕ್ಕೂ ಹೆಚು ವೈದ್ಯರು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಲು ನಿರಾಕರಿಸಿದರು (ಜ.೨೭, ೧೯೯೦)ನಂ.೨, ೨೦೦೦ ರಂದು ಸೆಂಟ್ ಲೂಯಿಸ್‍ನಲ್ಲಿ ನಡೆದ ಅಮೇರಿಕಾದ ವೈದ್ಯ ಹಾಗೂ ಸರ್ಜನ್‍ಗಳ ಸಂಘದ ೫೭ ನೆಯ ವಾರ್ಷಿಕ ಸಭೆಯಲ್ಲಿ ಮಕ್ಕಳಿಗೆ ಲಸಿಕೆಗಳನ್ನು ನೀಡಲು ಕಡ್ಡಾಯ ಮಾಡುವುದರ ಪರವಾಗಿ ಒಂದೇ ಒಂದು ಮತ ಬೀಳಲಿಲ್ಲ!
೧೯೫೫ ರಲ್ಲಿ ಡಾ.ಝೊನಾಸ್ ಸಾಕ್ ಪೊಲಿಯೊ ಲಸಿಕೆ ಕಂಡು ಹಿಡಿದರು. ತಾವು ಸತ್ತ ಪೊಲಿಯೊ ವೈರಸ್ ಗಳಿಂದ ತಯಾರಿಸಿದ ಪೋಲಿಯೋ ಲಸಿಕೆ ಪರಿಣಾಮಕಾರಿಯಾಗಿಲ್ಲ ಅಲ್ಲದೇ ಮಕ್ಕಳಿಗೆ ಮಾರಕವೂ ಕೂಡ ಎಂದು ಹೇಳಿದ್ದರು. ಮಕ್ಕಳಿಗೆ ಈ ಲಸಿಕೆಯನ್ನು ಕೊಟ್ಟಾಗ ಎರಡು ಮೂರು ವಾರ ಸರಿಯಾಗಿ ನಿದ್ದೆ ಮಾಡುವುದಿಲ್ಲ ಎಂದೂ ಹೇಳಿದ್ದಾರೆ. ಇದನ್ನು ಈಗಲೂ ನಾವು ಗಮನಿಸಬಹುದು.
ಈಗ ಅಂಕಿಅಂಶಗಳ ಬಗ್ಗೆ ನೋಡೋಣ. ೧೯೮೬ ರಲ್ಲಿ ಅಮೇರಿಕಾ ಸರ್ಕಾರ ’ನ್ಯಾಷನಲ್ ಚೈಲ್ಡ್‍ಹುಡ್ ವ್ಯಾಕ್ಸಿನ್ ಇಂಜುರಿ ಕಾಂಪೆನ್ಸೇಷನ್ ಆಕ್ಟ್’ ಎಂಬ ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯ್ದೆಯಡಿಯಲ್ಲಿ ಮಕ್ಕಳ ಮೇಲೆ ಲಸಿಕೆಗಳ ಕಾರಣದಿಂದ ಉಂಟಾದ ದುಷ್ಪರಿಣಾಮಗಳ ವಿವರಗಳನ್ನು ಸಂಗ್ರಹಿಸಲಾಯಿತು. ಈ ಕಾಯ್ದೆಯಡಿ ಪ್ರತೀ ವರ್ಷ ೧೧,೦೦೦ ಪ್ರಕರಣಾಗಳು ದಾಖಲಾಗುತ್ತವೆ. ೧೦೦ ರಿಂಡ ೨೦೦ ಸಾವಿನ ಪ್ರಕರಣಾಗಳು ದಾಖಲಾಗುತ್ತವೆ. ಬಾಯಿಯ ಮೂಲಕ ಕೊಡಲಾಗುವ ಓರಲ್ ಪೋಲಿಯೋ ವ್ಯಾಕ್ಸಿನ್ (ಓ.ಪಿ.ವಿ) ನಿಂದಾಗಿ ದಾಖಲಾದ ದುಷ್ಪರಿಣಾಮಗಳ ಸಂಖ್ಯೆ ೭,೪೩೨, ಗಂಭೀರ ಪರಿಣಾಮಗಳ ಸಂಖ್ಯೆ ೧೩೧೫ ಹಾಗೂ ಸವುಗಳ ಸಂಖ್ಯೆ ೩೨೩! ತಜ್ಞರ ಪ್ರಕಾರ ಇಲ್ಲಿ ದಾಖಲಾಗುವ ಸಂಖ್ಯೆ ಒಟ್ಟು ಪರಿಣಾಮದ ಶೇ.೧೦ ರಷ್ಟು ಹಾಗೂ ಸಾವಿನ ಶೇ.೧ ರಷ್ಟು ಮಾತ್ರ ದಾಖಲಾಗುತ್ತವೆ. ಹಾಗಿದ್ದಾಗ ಒಟ್ಟು ಸಂಖ್ಯೆ ಎಷ್ಟಿರಬಹುದು ಊಹಿಸಿ. ಇನ್ನೂ ಒಂದು ವಿಚಾರವೆಂದರೆ ತನ್ನ ದೇಶದ ಪ್ರತಿ ಪ್ರಜೆಯ ವಯಕ್ತಿಕ ಅರೋಗ್ಯಕ್ಕೆ ಗಮನ ಕೊಡುವ ಅಮೇರಿಕದಂತಹ ದೇಶದಲ್ಲೇ ಹೀಗಿರಬೇಕಾದರೆ ಜೀವಕ್ಕೊಂದು ಬೆಲೆಯೇ ಇಲ್ಲದಂತೆ ದಿನವೂ ಸಹಸ್ರ ಸಂಖ್ಯೆಯಲ್ಲಿ ಸಾಯುವ ನಮ್ಮ ದೇಶದಲ್ಲಿ ಹೇಗಿರಬೇಕು ಊಹಿಸಿ.(ಅಂಕಿ ಅಂಶಗಳು: ಸಿಟಿಜನ್ಸ್ ಫ಼ಾರ್ ಹೆಲ್ತ್ ಕೇರ್ ಫ್ರೀಡಮ್, ಫ಼ೂಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್, ಡೈಲಿ ಎಕ್ಸ್‍ಪ್ರೆಸ್.) ಈ ಕಾಯ್ದೆ ಜಾರಿಗೆ ಬಂದ ನಂತರ ೨,೬೦೦ ಕ್ಕೂ ಹೆಚ್ಚು ತೊಂದರೆಗೊಳಗಾದ ಮಕ್ಕಳ ತಂದೆ ತಾಯಿಗಳಿಗೆ ಪರಿಹಾರ ಧನವನ್ನು ನೀಡಲಾಗಿದೆ. (ದಿ ವೈನ್ ಮತ್ತು ಡೈಲಿ ಎಕ್ಸ್‍ಪ್ರೆಸ್ಸ್ ವರದಿಗಳು). ಲಸಿಕೆ ಹಾಕಿಸಿದ ನಂತರವೂ ಮಗು ಅದೇ ರೋಗದಿಂದ ತೀರಿಕೊಂಡರೆ ಅಪ್ಪ ಅಮ್ಮಂದಿರು ಲಸಿಕೆಯ ದುಷ್ಪರಿಣಾಮದಿಂದ ಖಾಯಿಲೆ ಉಂಟಾಗಿರಬಹುದು ಎಂಬ್ ನಿಟ್ಟಿನಲ್ಲಿ ಯೋಚಿಸುವುದೇ ಇಲ್ಲ. ಇನ್ನು ಒಂದೆರಡು ಡೋಸ್ ಹಾಕಿಸಬೇಕಿತ್ತೇನೋ ಎಂದುಕೊಳ್ಳುತ್ತಾರೆ. ಇದಕ್ಕೆ ಡಾಕ್ಟರ್‌ಗಳೂ ಇಂಬು ಕೊಡುತ್ತಾರೆ. ಇನ್ನು ಮುಂದೆ ಲಸಿಕೆ ಹಾಕಿಸಿದ ಮೇಲೆ ಈ ರೋಗ ಬರುವುದಿಲ್ಲ ಎಂದು ವಾಯಿದೆ ಬರೆದುಕೊಡಿ ಎಂದು ಲಸಿಕೆ ಹಾಕಿದ ವೈದ್ಯರನ್ನು ಕೇಳಿ. ಬರೆದುಕೊಟ್ಟರೆ ಸಂತೋಷ. ಬರೆದುಕೊಡದಿದ್ದರೆ .....
ಪೋಲಿಯೊ ಬಗ್ಗೆ ಇದಲ್ಲದೆ ಇನ್ನು ಕೆಲವು ವಿಷಯಗಳಿವೆ. ಡಿ.ಡಿ.ಟಿ ಯಂತಹ ವಿಷಕಾರಕ ರಸಾಯನಿಕಗಳಿಂದಲೂ ಪೋಲಿಯೊ ರೀತಿಯ ಲಕ್ಷಣಗಳು ಕಂಡುಬರುತ್ತವೆ. ಈ ಲಕ್ಷಣಗಳಿಗೆ ವಿರುದ್ಧವಾಗಿ ಲಸಿಕೆ ಯಾವುದೇ ಸಹಾಯ ಮಾಡುವುದಿಲ್ಲ.(ಡಾ.ಮಾರ್ಟಾನ್ ಬಿಸ್ಕಿಂಡ್). ಅಮೇರಿಕಾ ಸರ್ಕಾರೀ ಸ್ವಾಮ್ಯದ ಸಿ.ಡಿ.ಸಿ ಬಿಡುಗಡೆ ಮಾಡಿರುವ ಪಿಂಕ್ ಬುಕ್ ನಲ್ಲಿ ಪೋಲಿಯೋದ ಬಗ್ಗೆ ಹೀಗೆ ವಿವರಿಸುತ್ತಾರೆ. ಶೇ.೯೫ ರಷ್ಟು ಕೇಸ್‍ಗಳಲ್ಲಿ ಪೋಲಿಯೋ ವೈರಸ್ ಧಾಳಿ ಮಾಡಿರುವುದು ಗೊತ್ತಾಗುವುದೂ ಇಲ್ಲ! ಸುಮ್ಮನೆ ವೈರಸ್‍ಗಳು ಬಂದು ಹೋಗುತ್ತವೆ. ಶೇ.೪ ರಿಂದ ೬ ರ ವರೆಗಿನ ಕೇಸ್‍ಗಳಲ್ಲಿ ಒಂದು ವಾರದ ಮಟ್ಟಿಗೆ ಪೋಲಿಯೊ ಜ್ವರದ ರೂಪದಲ್ಲಿ ಇದ್ದು ಹೋಗುತ್ತದೆ. ಉಳಿದ ಶೇ.೧ ರಿಂದ ೨ರಷ್ಟು ಕೇಸ್‍ಗಳಲ್ಲಿ ಕತ್ತು ಮತ್ತು ಬೆನ್ನು ಹರಿಯುವಂತಹ ನೋವು ಬಂದು ಒಂದು ವಾರದಿಂದ ಹತ್ತು ದಿನಗಳ ಮಟ್ಟಿಗೆ ಇದ್ದು ನಂತರ ಗುಣವಾಗುತ್ತದೆ. ಉಳಿದ ಕೊನೆಯ ೧% ಕೇಸ್‍ಗಳಲ್ಲಿ ಪಾರ್ಶ್ವವಾಯು ತಗುಲುತ್ತದೆ. ಈ ಪಾರ್ಶ್ವವಾಯು ತಗುಲಿದವರಲ್ಲಿ ಶೇ.೨ ರಿಂದ ೩ ಕೇಸ್‍ಗಳಲ್ಲಿ ಸಾವು ಸಂಭವಿಸುತ್ತದೆ. ಅಂದರೆ ಪೋಲಿಯೋ ವೈರಸ್ ಧಾಳಿ ಮಾಡಿದರೆ ಶೇ.೯೯.೫ ಕ್ಕೂ ಹೆಚ್ಚು ಜನ ಸಂಪೂರ್ಣವಾಗಿ ಗುಣಮುಖರಾಗುತ್ತಾರೆ. ಈ ಪೊಲಿಯೊ ವೈರಸ್ ಲಕ್ಷಣಗಳು ಕಾಣಿಸಿದಾಗ ಪೌಷ್ಟಿಕ ಆಹಾರ ಸೇವನೆಯಂತಹ ಮುಂಜಾಗ್ರತೆಯನ್ನು ತೆಗೆದುಕೊಂಡರೆ ಮಗುವಿಗೆ ಯಾವುದೇ ಅಪಾಯವಾಗುವುದಿಲ್ಲ. ಪೋಲಿಯೋದಿಂದ ಸಾಯುವ ಮಕ್ಕಳ ಸಂಖ್ಯೆ ಅಪಘಾತದಿಂದಾಗಿ ಸಾಯುವ ಮಕ್ಕಳ ಸಂಖ್ಯೆಗಿಂತಲೂ ಕಡಿಮೆ(ಪೋಲಿಯೋ ಲಸಿಕೆ ಹಾಕಿಸದಿದ್ದಾಗಿಯೂ)! ಅಲ್ಲದೇ ಡಿ.ಡಿ.ಟಿಯಂತಹ ರಸಾಯನಿಕಗಳ ಅಡ್ಡಪರಿಣಾಮಗಳಿಂದ ಉಂಟಾಗುವ ಲಕ್ಷಣಗಳನ್ನು ಪೋಲಿಯೋ ಎಂದು ತಿಳಿಯುವ ಸಾಧ್ಯತೆ ಇರುವುದರಿಂದ ಪೋಲಿಯೋದಿಂದ ಸಾಯುವವರ ಸಂಖ್ಯೆ ಇನ್ನೂ ಕಡಿಮೆಯಿದೆ ಎನ್ನಬಹುದು.
ಈಗ ಮೆನಿಂಜೈಟಿಸ್ ಗೆ ಬರೋಣ. ಲಸಿಕೆಯಿಂದಾಗಿ ಪೋಲಿಯೋ ನಮ್ಮ ದೇಹದಲ್ಲಿ ಮರುಕಳಿಸುವ ಸಾಧ್ಯತೆ ಇದೆ ಎಂದು ಹೇಳಿದೆನಷ್ಟೆ! ಪೋಲಿಯೊ ಮರುಕಳಿಸುವ ಸಂಖ್ಯೆ ಜಾಸ್ತಿಯಾದಾಗ ಲಸಿಕೆಯ ಮೇಲಿನ ನಂಬಿಕೆಯನ್ನು ಕಾಪಾಡಲು ಲಸಿಕೆಯ ನಂತರದ ಪೋಲಿಯೋಗೆ "ಅಸೆಪ್ಟಿಕ್ ಮೆನಿಂಜೈಟಿಸ್" ಎಂದು ಹೆಸರಿಡಲಾಯಿತು. ಈ ರೀತಿಯ ಮೆನಿಂಜೈಟಿಸ್ ಮತ್ತು ಪೊಲಿಯೊದ ಲಕ್ಷಣಗಳು ಒಂದೇ ಇರುತ್ತವೆ. ಇದು ಮೈಕೊಬ್ಯಾಕ್ಟೀರಿಯಾ ಎಂಬ ಸೂಕ್ಷ್ಮಾಣು ಜೀವಿಯಿಂದ ಹಾಗೂ ಲಸಿಕೆಗಳ ಅಡ್ಡಪರಿಣಾಮದಿಂದ ಬರುತ್ತದೆ ಎಂದು ಸಾಬೀತಾಗಿದೆ!
ಈ ಲೇಖನಕ್ಕೆ ಸೊಚಿಯಾಗಿ ನಾನು ಹೇಳುವುದೆಂದರೆ ಲಸಿಕೆಗಳು ನಿಸರ್ಗಕ್ಕೆ ವಿರುದ್ಧವಾದವುಗಳು. ನಮ್ಮ ದೇಹವು ಲಸಿಕೆಗಳನ್ನು ಒಪ್ಪಿಕೊಳ್ಳಲು ನಿಸರ್ಗಕ್ಕೆ ವಿರುದ್ಧವಾದ ರೀತಿಯಲ್ಲಿ ತಯಾರಾಗಬೇಕಾಗುತ್ತದೆ. ಅಪ್ರಾಕೃತಿಕ ಅಭ್ಯಾಸಗಳು ಎಂದಿಗೂ ಒಳ್ಳೆಯದಲ್ಲ. ಲಸಿಕೆ ಹಾಕಿದರೆ ಮಾತ್ರ ಮಗು ಆರೋಗ್ಯವಾಗಿರುತದೆ ಎಂಬುದು ಮೂಢನಂಬಿಕೆ. ಮಗು ಆರೋಗ್ಯವಾಗಿರಬೇಕೆಂದರೆ ವಯೋಸಹಜವಾದ ಪೊಷ್ಟಿಕ ಆಹಾರ, ಆಟ ಹಾಗೂ ವ್ಯಾಯಾಮಗಳಿಂದ ಪೋಷಿಸಬೇಕು . ನಮ್ಮ ಮುಂದಿನ ಪೀಳಿಗೆಯ ರಕ್ತದಲ್ಲಿ ಕಂಡೂ ಕಂಡೂ ವಿಷವನ್ನು ಸೇರಿಸುವುದು ತರವಲ್ಲ

2 ಕಾಮೆಂಟ್‌ಗಳು:

Unknown ಹೇಳಿದರು...

Hi Harsha,

Its realy good blog.

regards,
Sudindra

shadakshara murthy ಹೇಳಿದರು...

sir namaskara, matte yake yavudu article baredilla, bahala dina aaytu.Matte ph madilla bahala dina aaytu ondsala ph maadi.
Shadakshara murthy
996 435 2605