ಸೋಮವಾರ, ಮೇ 11, 2009

ಅಯೊಡಿನ್ ಹೆಸರಿನ ಮಹಾದ್ರೋಹ.!!!

ಅಯೊಡಿನ್‍ಯುಕ್ತ ಉಪ್ಪಿನ ಬಗ್ಗೆ ಸಾಕಷ್ಟು ಪ್ರಚಾರ ನಡೆದಿದೆ. ಇದಕ್ಕೆ ಸರ್ಕಾರದ ಕುಮ್ಮಕ್ಕೂ ಸಾಕಷ್ಟಿದೆ. ಸರ್ಕಾರದ ಈ ಕುಮ್ಮಕ್ಕಿನ ಹಿಂದೆ ಅನೇಕ ದುಷ್ಟ ಕೈಗಳ ಕೈವಾಡವಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಅಯೊಡಿನ್ ನಮ್ಮ ದೇಹಕ್ಕೆ ಮೈಕ್ರೊ ಪ್ರಮಾಣದಲ್ಲಿ ಬೇಕಾದ ಅಂಶ. ಅಯೋಡಿನ್ ಅಂಶ ನಮ್ಮ ದೇಹದಲ್ಲಿ ಕಡಿಮೆಯಾದಾಗ ಥೈರಾಯಿಡ್ ಗ್ರಂಥಿ ಅಯೋಡಿನ್ ಅನ್ನು ಹೆಚ್ಚಾಗಿ ಹೀರಿಕೊಳ್ಳಲು ಊದಿಕೊಳ್ಳತೊಡಗುತ್ತದೆ. ಇದೇ ಗಾಯ್ಟರ್ ರೋಗ.
ಗಾಯ್ಟರ್ ಅಥವಾ ಗಳಗಂಡ ರೋಗ ನಮ್ಮ ದೇಶದಲ್ಲಿ ಕಂಡುಬರುವುದೇ ವಿರಳ. ಅಯೋಡಿನ್ ಕೊರತೆಯನ್ನು ದೊಡ್ಡ ಗಂಡಾಂತರವೆಂಬಂತೆ ಬಿಂಬಿಸಿ ಅಯೋಡೀಕರಿಸಿದ ಉಪ್ಪನ್ನು ಬಲವಂತವಾಗಿ ಎಲ್ಲರಿಗೂ ತಿನ್ನಿಸಲಾಗುತ್ತಿದೆ. ಗಳಗಂಡ ರೋಗ ನಮ್ಮ ದೇಶದಲ್ಲಿ ಕಂಡು ಬರುವುದು ಲಡಾಕ್, ಶಿಮ್ಲಾ ರೀತಿಯ ಅತಿ ಹೆಚ್ಚಿನ ಮಣ್ಣಿನ ಸವೆತ ಇರುವ ಗುಡ್ಡಗಾಡು ಪ್ರದೇಶಗಳಲ್ಲಿ ಮಾತ್ರ. ಎಲ್ಲಾ ಸೇರಿದರೇ ಅಯೋಡಿನ್ ಕೊರತೆಯನ್ನು ಎದುರಿಸುತ್ತಿರುವುದು ಶೇ.೨ ರಷ್ಟು ಜನರು ಮಾತ್ರ. ಶೇ.೨ರ ಕೊರತೆಯನ್ನು ನೀಗಿಸುವುದಕ್ಕಾಗಿ ಉಳಿದ ಶೇ.೯೮ ರಷ್ಟು ಜನರಿಗೆ ಅಯೋಡಿನ್ ತಿನ್ನಿ ಎಂದು ಪ್ರಚಾರ ಮಾಡಲಾಗುತ್ತಿದೆ.

ಅನೇಕ ವ್ಯಕ್ತಿಗಳಲ್ಲಿ ಅಯೋಡಿನ್ ಅಲರ್ಜಿ ಇರುತ್ತದೆ. ಗಳಗಂಡ ಚಿಕಿತ್ಸೆಗಾಗಿ ಅಯೋಡಿನ್ ನೀಡಬೇಕಾದರೂ ಈ ಅಲರ್ಜಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಅಲರ್ಜಿ ಇರುವ ವ್ಯಕ್ತಿಗಳಲ್ಲಿ ಚಿಕ್ಕ ಪ್ರಮಾಣದ ಅಯೋಡಿನ್ ಸಹ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಬಲ್ಲುದು. ಇದಲ್ಲದೇ ದೇಹದಲ್ಲಿ ಅಯೋಡಿನ್‍ನ ಅನವಶ್ಯಕ ಹೆಚ್ಚಳದಿಂದಾಗಿ ಖಿನ್ನತೆ, ಉಸಿರಾಟದ ತೊಂದರೆಗಳು ನಪುಂಸಕತ್ವ, ಕೂದಲುದುರುವಿಕೆ,ಚರ್ಮದ ರೋಗಗಳು , ಗಳಗಂಡ ನಿಶ್ಯಕ್ತಿ ಇತ್ಯಾದಿ ಆರೋಗ್ಯಕ್ಕೆ ಹಾನಿಕಾರಕ ತೊಂದರೆಗಳು ಉಂಟಾಗುವ ಸಾಧ್ಯತೆಗಳಿವೆ. ಅಯೋಡಿನ್ ತಿನ್ನುವುದನ್ನು ಕಡಿಮೆ ಮಾಡುವುದರಿಂದ ಗಂಟಲಿನ ಕ್ಯಾನ್ಸರ್ ಕಡಿಮೆಯಾಗುವ ಸಾಧ್ಯತೆಯ ಬಗ್ಗೆ ಜಪಾನ್‍ನಲ್ಲಿ ಸಂಶೋಧನೆಗಳು ತಿಳಿಸುತ್ತವೆ. ಅಯೋಡಿನ್ ಕೊರತೆ ಇರುವ ಜರ್ಮನಿ ದೇಶದಲ್ಲಿ ಗಂಟಲು ಕ್ಯಾನ್ಸರ್ ಕೂಡ ಕಡಿಮೆಯೆ. ಅಲ್ಲದೇ ಗರ್ಭಿಣಿ ಸ್ತ್ರೀಯರಿಗೂ ಅಯೋಡಿನ್ ಅಪಾಯ ಉಂಟುಮಾಡುತ್ತದೆ.

ನಮ್ಮ ದೇಹಕ್ಕೆ ಬೇಕಾದುದಕ್ಕಿಂತ ಹೆಚ್ಚಿನ ಪ್ರಮಾಣದ ಅಯೋಡಿನ್ ಸೇವಿಸಿದರೆ ಅಪಾಯ ಖಂಡಿತ ತಪ್ಪಿದ್ದಲ್ಲ. ವಿಶ್ವ ಆರೊಗ್ಯ ಸಂಸ್ಥೆಯ ನಿಯಮದ ಪ್ರಕಾರ ಒಂದು ದಿನಕ್ಕೆ ಮನುಷ್ಯನೊಬ್ಬ ತೆಗೆದುಕೊಳ್ಳಬಹುದಾದ ಅಯೋಡಿನ್ ಪ್ರಮಾಣ ಹೆಚ್ಚೆಂದರೆ ೨೦೦ ಮೈಕ್ರೊಗ್ರಾಮ್‍ಗಳು. ಸಧ್ಯದಲ್ಲಿ ನಾವು ಸೇವಿಸುತ್ತಿರುವ ಪ್ರಮಾಣ ಇದಕ್ಕಿಂತ ಎಷ್ಟೊ ಪಟ್ಟು ಹೆಚ್ಚು. ಅನೇಕ ಕಡೆ ಅಯೊಡೀಕರಿಸುವ ನೆಪದಲ್ಲಿ ಪೊಟಾಶಿಯಮ್ ಅಯೊಡೈಡ್‍ನ್ನು ಸಾಗರದ ಉಪ್ಪಿನ ಮೇಲೆ ಸಿಂಪಡಿಸಲಾಗುತ್ತದೆ. ಈ ರೀತಿ ಎರಚಲಾದ ಅಯೋಡಿನ್ ನಮ್ಮ ದೇಹಕ್ಕೆ ಎಷ್ಟರ ಮಟ್ಟಿಗೆ ಸುರಕ್ಷಿತ ಹಾಗೂ ದೇಹ ಇದನ್ನು ಅರಗಿಸಿಕೊಳ್ಳಬಹುದೆ ಎಂಬುದರ ಬಗ್ಗೆಯೂ ಸಾಕಷ್ಟು ಅನುಮಾನಗಳಿವೆ.
ಹಾಲೆಂಡ್ ಮತ್ತು ಟಾಸ್ಮೆನಿಯಾದಲ್ಲಿ ಅಯೋಡಿನ್ ಉಪ್ಪನ್ನು ಕಡ್ಡಾಯವನ್ನಾಗಿ ಮಾಡಲಾಯಿತು. ನಂತರ ಅಲ್ಲಿನ ಪುರುಷರಲ್ಲಿ ಗಂಟಲಿನ ನಂಜು ಹೆಚ್ಚಾಗಿದ್ದು ಕಂಡು ಬಂದು ಈ ಕಡ್ಡಾಯವನ್ನು ಹಿಂತೆಗೆದುಕೊಳ್ಳಲಾಯಿತು. ಇಂಗ್ಲೆಂಡ್ ಪ್ರಜೆಗಳಲ್ಲಿಯೂ ಒಂದು ಕಾಲದಲ್ಲಿ ಅಯೋಡಿನ್ ಕೊರತೆ ಇತ್ತು. ಆಗ ಇಂಗ್ಲೆಂಡ್ ಸರ್ಕಾರವು ಅಯೋಡಿನ್ ಉಪ್ಪನ್ನು ಕಡ್ಡಾಯ ಮಾಡುವುದರ ಬದಲಾಗಿ ತನ್ನ ಪ್ರಜೆಗಳಿಗೆ ಸರಿಯಾದ ಆಹಾರ ಪದ್ಧತಿಯ ಬಗ್ಗೆ ಮಾರ್ಗದರ್ಶನ ಮತ್ತು ಶಿಕ್ಷಣವನ್ನು ನೀಡಿತು. ನಾರ್ವೆ ಇತ್ಯಾದಿ ದೇಶಗಲಲ್ಲಿಯೂ ಅಯೋಡಿನ್ ರಹಿತ ಉಪ್ಪಿನ ಮೇಲಿನ ನಿಷೇಧವನ್ನು ಹಿಂದೆಗೆದುಕೊಳ್ಳಲಾಗಿದೆ.

ಅಯೋಡೀಕರಿಸಿದ ಉಪ್ಪನ್ನು ವಿರೋಧಿಸಲು ಸಾಕಷ್ಟು ಆರ್ಥಿಕ ಹಿನ್ನೆಲೆಯುಳ್ಳ ಕಾರಣಗಳೂ ಇವೆ. ಮೊದಲು ಉಪ್ಪು ಒಂದು ಅಥವಾ ಎರಡು ರೂಪಾಯಿಗೆ ಲಭ್ಯವಿತ್ತು. ಈಗ ಎಂಟರಿಂದ ಹನ್ನೆರಡು ರೂಪಾಯಿ ಆಗಿದೆ. ಅರ್ಧಕ್ಕರ್ಧ ಬಡವರೇ ಇರುವ ನಮ್ಮ ದೇಶದಲ್ಲಿ ಉಪ್ಪನ್ನು ಇಷ್ಟೊಂದು ಹಣ ಕೊಟ್ಟು ಕೊಂಡುಕೊಳ್ಳಲು ಬಹಲ ಜನರಿಗೆ ಸಾಧ್ಯವಾಗುವುದಿಲ್ಲ. ಅಯೋಡಿಕರಿಸದ ಉಪ್ಪನ್ನು ಮಾರಲು ಸರ್ಕಾರ ಅನುಮತಿ ನೀಡುವುದಿಲ್ಲವಾದ್ದರಿಂದ ಅನಿವಾರ್ಯವಾಗಿ ಬಡವರೂ ಸಹ ಎಂಟು ರೂಪಾಯಿ ತೆತ್ತು ಉಪ್ಪನ್ನು ಕೊಳ್ಳಬೇಕಾಗಿದೆ.
ಇಲ್ಲಿ ನಡೆಯುವ ಇನ್ನೂ ಒಂದು ಮೋಸ ಎಂದರೆ ಉಪ್ಪಿಗೆ ಅಯೋಡಿನ್ ಸೇರಿಸಲು ೨ ಪೈಸೆ ಸಾಕು. ಆದರೆ ಅಯೋಡಿನ್ ಹಾಕಿದ್ದೇವೆ ಎಂದು ಖರ್ಚಿಗಿಂತ ಅನೇಕ ಪಟ್ಟು ಹಣವನ್ನು ಉಪ್ಪು ಮಾರುವ ಕಂಪನಿಗಳು ಜನರಿಂದ ಪೀಕುತ್ತಿವೆ. ಅಯೊಡಿನ್ ಉಪ್ಪಿನ ನೆಪದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ನಮ್ಮ ದೇಶದಿಂದ ಹೊತ್ತೊಯ್ದಿರುವ ಸಂಪತ್ತು ವರ್ಷಕ್ಕೆ ಹದಿನೈದು ಸಾವಿರ ಕೋಟಿ ರೂಪಾಯಿಗಳು! ಹಳ್ಳಿಯ ರೈತರಿಗೆ ರಾಸುಗಳ ಮೇವಿಗಾಗಿ ಕ್ವಿಂಟಾಲ್‍ಗಟ್ಟಲೆ ಉಪ್ಪು ಬೇಕಾಗುತ್ತದೆ. ತೆಂಗಿನ ಬೆಳೆಗಾಗಿ ನೀರಿಗೆ ಸೇರಿಸಲು ಉಪ್ಪು ಬೇಕಾಗುತ್ತದೆ. ಉಪ್ಪಿನ ಬೆಲೆಯಲ್ಲಿ ಎಂಟು ಪಟ್ಟು ಹೆಚ್ಚಳದಿಂದಾಗಿ ಈ ಬಡರೈತರಿಗೆಲ್ಲಾ ತೊಂದರೆಯಾಗುತ್ತದೆ.
ಅಯೋಡಿನ್ ಸೇರಿಸಲು ಉಪ್ಪನ್ನು ಸಾಕಷ್ಟು ಸಂಸ್ಕರಿಸಬೇಕಾಗುತ್ತದೆ. ಹೀಗೆ ಸಂಸ್ಕರಿಸುವಾಗ ಉಪ್ಪಿನಲ್ಲಿ ಪ್ರಾಕೃತಿಕವಾಗಿ ಇರಬಹುದಾದ ಅನೇಕ ಅಂಶಗಳು ನಾಶವಾಗಿ ಹೋಗುತ್ತವೆ. ಇದರಿಂದ ಉಪ್ಪು ಹೆಚ್ಚು ಕಟುವಾಗುತ್ತದೆ. ಆದ್ದರಿಂದಲೇ ಸಹಜ ಉಪ್ಪಿಗಿಂತ ಸಂಸ್ಕರಿತ ಉಪ್ಪನ್ನು ಅಡಿಗೆಗೆ ಕಡಿಮೆ ಹಾಕುವಂತೆ ಜಾಹೀರಾತು ನೀಡುತ್ತಾರೆ.
ಅಯೋಡಿನ್ ನಮ್ಮ ದೇಹಕ್ಕೆ ನಾವು ತಿನ್ನುವ ತರಕಾರಿ ಹಣ್ಣುಗಳ ಮೂಲಕವೇ ನಮ್ಮ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗುತ್ತದೆ. ಕರಾವಳಿಯಲ್ಲಿರುವವರಿಗೆ ಅಯೋಡಿನ್ ತಿನ್ನುವ ಅವಶ್ಯಕತೆಯೇ ಇಲ್ಲ. ನಾವು ತಿನ್ನುವ ಸೊಪ್ಪು ತರಕಾರಿಗಳು ಸಾಕಷ್ಟು ಅಯೋಡಿನ್ ಹೊಂದಿರುತ್ತವೆ. ಅಯೋಡಿನ್ ರಹಿತ ಉಪ್ಪು ಲಭ್ಯತೆ ಇಲ್ಲದಿರುವಾಗ ಸೈಂಧವ ಲವಣವನ್ನು ಉಪಯೋಗಿಸಬಹುದು. ಅಯೋಡಿನ್ ಉಪ್ಪಿಗಿಂತ ಇದು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗಬಹುದು. ಇಲ್ಲವೇ ಉಪ್ಪನ್ನು ತಿನ್ನದಿದ್ದರೆ ಇನ್ನೂ ಒಳ್ಳೆಯದು. ಬೊಜ್ಜೂ ಕಡಿಮೆಯಾಗುತ್ತದೆ.
ಅಯೋಡಿನ್‍ಯುಕ್ತ ಉಪ್ಪು ಬಹುರಾಷ್ಟ್ರೀಯ ಕಂಪನಿಗಳ ಹಣ ಮಾಡುವ ತಂತ್ರವಲ್ಲದೇ ಇನ್ನೇನೂ ಅಲ್ಲ. ಈ ಉಪ್ಪಿನಲ್ಲಿ ಬೂಸಾ ತಿಂದ ರಾಜಕಾರಣಿಗಳ ಕೈವಾಡವನ್ನೂ ತಳ್ಳಿಹಾಕುವಂತಿಲ್ಲ. ಉಪ್ಪಿನ ಮೇಲಿದ್ದ ಕರವನ್ನು ಬಾಪೂ ದಂಡಿ ಯಾತ್ರೆಯ ಮೂಲಕ ಕಿತ್ತು ಹಾಕಿಸಿದರು. ಈಗ ನಾವು ಅಯೋಡಿನ್ ಮೂಲಕ ತೆರಿಗೆಯನ್ನು ಕಟ್ಟುತ್ತಿದ್ದೇವೆ. ಅಯೋಡಿನ್ ಪ್ರಚಾರ ನೀಡಿದಷ್ಟು ಒಳ್ಳೆಯದಲ್ಲ. ಸಾಧ್ಯವಾದಷ್ಟು ಅಯೋಡಿನ್ ರಹಿತ ಉಪ್ಪು ಉಪಯೋಗಿಸಲು ಪ್ರಯತ್ನಿಸಿ ರೋಗಗಳಿಂದ ಹಾಗೂ ಬಹುರಾಷ್ಟ್ರೀಯ ಕಂಪನಿಗಳಿಂದ ಬಚಾವಾಗಬಹುದು.
ಲೇಖನವನ್ನು ಬಹಳ ಸೌಮ್ಯ ಭಾಷೆಯಲ್ಲಿ ಬರೆದಿದ್ದೇನೆ. ಆದರೆ ವಿಷಯ ನಾನು ಹೇಳಿದ್ದಕ್ಕಿಂತ ನೂರಾರು ಪಟ್ಟು ಹೆಚ್ಚು ಗಂಭೀರವಾಗಿದೆ. ಅಯೋಡಿನ್ ಬೇಗ ದೂರ ಮಾಡಿದಷ್ಟೂ ಹೆಚ್ಚು ಉಪಯೋಗ ನಮ್ಮ ದೇಹಕ್ಕೆ ಮತ್ತು ದೇಶಕ್ಕೆ ಆಗುತ್ತದೆ.
ಆಕರಗಳು :
1. http://www.petitiononline.com/pil0001/petition.html
http://www.karmayog.org/iodisedsalt/iodisedsalt_3665.htm
http://www.narasan.at/en/berichte/jod.html4. http://www.diagnose-me.com/treat/T26559.
5. http://www.seriouseats.com/2008/06/iodized-salt-good-sources-of-iodine.html
. http://www.indiatogether.org/2006/jul/hlt-saltmess.htm